ಮಾಘನಂದಿ
ಸುಮಾರು 1253. ಜೈನಕವಿ. ಮೂಲಸಂಘ ಬಲಾತ್ಕಾರ ಗಣದ ಕುಮುದಚಂದನ ಶಿಷ್ಯ. ಈತ ತನ್ನ ಗುರು ಪರಂಪರೆಯನ್ನು ವಿಸ್ತಾರವಾಗಿ ಕೊಟ್ಟಿದ್ದಾನೆ. ತನ್ನನ್ನು ಚತುರನುಯೋಗಕುಶಲ, ಸಿದ್ಧಾಂತಾಭಿವರ್ಧನ ಸುಭಾಕರ ಎಂದು ವಿಶ್ಲೇಷಿಸಿಕೊಂಡಿದ್ದಾನೆ. ಬೆಣ್ಣೆಗುಡ್ಡದ ಶಾಸನದಲ್ಲಿ ಈತ ಅಭಿನವಸಾರ ಚತುಷ್ಟಯದ (ಸಿದ್ಧಾಂತಸಾರ, ಶ್ರಾವಕಾಚಾರಸಾರ, ಪದಾರ್ಥಸಾರ ಮತ್ತು ಶಾಸ್ತ್ರಸಾರ ಸಮುಚ್ಚಯ) ಕರ್ತೃವೆಂದೂ ಹೊಯ್ಸಳ ದೊರೆ 3ನೆಯ ನರಸಿಂಹನಿಂದ 1265ರಲ್ಲಿ ದತ್ತಿಯನ್ನು ಪಡೆದನೆಂದೂ ಹೇಳಿದೆ. ಶಾಸ್ತ್ರಸಾರ ಸಮುಚ್ಚಯ ಸಂಸ್ಕøತ ಗ್ರಂಥವೊಂದರ ಕನ್ನಡ ಟೀಕೆ. ಇದರಲ್ಲಿ ನಾಲ್ಕು ಅಧ್ಯಾಯಗಳಿದ್ದು ಅನುಯೋಗಗಳ ವಿಷಯ ಬಂದಿದೆ. ಪದಾರ್ಥಸಾರವೂ ಕನ್ನಡ ಟೀಕಾಗ್ರಂಥ. ಇದರಲ್ಲಿ 30 ಅಧ್ಯಾಯಗಳಿದ್ದು ಜೈನತತ್ತ್ವದ ವಿಸ್ತøತ ವಿವರಣೆಯಿದೆ. ಉಳಿದ ಎರಡು ಗ್ರಂಥಗಳ ಪರಿಚಯ ಅಷ್ಟಾಗಿ ದೊರೆಯುವುದಿಲ್ಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ